ಹುಲಿಗಳ ನೆಲೆ ಸಂರಕ್ಷಣೆ ಮಾಡಬೇಕಿದೆ: ವಿ.ತೇಜಸ್ಒಂದು ಕಾಡಿನಲ್ಲಿ ಹುಲಿ ಸಂತತಿ ವಾಸವಾಗಿದೆ ಎಂದರೆ ಆ ಕಾಡು ಸಮೃದ್ಧವಾಗಿದೆ ಎಂದರ್ಥ. ಹುಲಿಗಳ ಆಹಾರಕ್ಕಾಗಿ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಬಲಿ ಪ್ರಾಣಿಗಳು ಬೇಕಾಗಲಿವೆ. ಹುಲಿ ಕಾಡಿನಲ್ಲಿ ಕಾಟಿ, ಜಿಂಕೆ, ಕೃಷ್ಣಾಮೃಗ, ಕಾಡು ಹಂದಿ ಸೇರಿದಂತೆ ಹಲವು ಬಗೆಯ ಬಲಿ ಪ್ರಾಣಿಗಳು ಸಮೃದ್ಧವಾಗಿ ಇದ್ದಾಗ ಹುಲಿಗಳ ಸಂತತಿ ಹೆಚ್ಚಲು ಸಾಧ್ಯ.