ಶಿಕ್ಷಣದ ಹಂತಗಳಲ್ಲಿ ದಾಸ ಸಾಹಿತ್ಯ ಪಠ್ಯವಾಗಲಿ: ಸಿರನೂರಕರ್ಕಾಲಾತೀತ ತತ್ವ, ಬೋಧನೆ, ಸಮಾಜಮುಖಿ ಚಿಂತನೆ, ಜೀವಪರ ಧೋರಣೆ, ವ್ಯಕ್ತಿತ್ವ ಮತ್ತು ಪರಂಪರೆ ನಿರ್ಮಾಣದ ಆಶಯ ಹೊಂದಿರುವ ದಾಸ ಸಾಹಿತ್ಯವನ್ನು ಔಪಚಾರಿಕ ಶಿಕ್ಷಣದ ಎಲ್ಲಾ ಹಂತಗಳಲ್ಲಿಯೂ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ದಾಸ ಸಾಹಿತ್ಯ ಸಂಶೋಧಕ, ಅಂಕಣಕಾರ ಡಾ.ಶ್ರೀನಿವಾಸ ಸಿರನೂರಕರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.