ಈ ಸರ್ಕಾರಕ್ಕೆ ಕಿವಿಯೂ ಇಲ್ಲ ಕಣ್ಣೂ ಇಲ್ಲಈ ಕಾಂಗ್ರೆಸ್ ಸರಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲದಂತಾಗಿದ್ದು, ಒಂದು ರೀತಿ ಇದು ಬಾಯಿಬಡುಕ ಸರಕಾರವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಹುಟ್ಟುಕಾಣದ, ಹುಟ್ಟುಕಿವುಡರಿಗೆ ಅಧಿಕಾರ ಕೊಟ್ಟಿದ್ದರೂ ಜನರ ಕಷ್ಟ ಗೊತ್ತಾಗುತ್ತಿತ್ತು. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನರ ಸಮಸ್ಯೆ ಬಿಟ್ಟು ಮೀಡಿಯಾ ಮುಂದೆ ಬಂದು ಸಂಬಂಧವಿಲ್ಲದ ವಿಷಯಗಳಲ್ಲಿ ಬಾಯಿ ಬಡಿದುಕೊಳ್ಳುತ್ತದೆ ಎಂದರು.