ಅನ್ಯ ಧರ್ಮಕ್ಕೆ ಸೇರಿದ ಸ್ವಾಮೀಜಿ ಬೇಡ ಎಂದ ಗ್ರಾಮಸ್ಥರುಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿ ಇವನಾರವ, ಇವನಾರವ ಇವನಾರವ ಎಂದೇನಿಸಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೇನಿಸಯ್ಯ ಎಂದು ಸಾರಿದ್ದರು. ಆದರೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ನೇಮಕಗೊಂಡ ನಿಜಲಿಂಗ ಸ್ವಾಮೀಜಿ ಅನ್ಯ ಧರ್ಮಕ್ಕೆ ಸೇರಿದವರು, ಮಠಕ್ಕೆ ಬೇಡ ಎಂದು ವಾಪಸ್ ಕಳುಹಿಸಿದ ಅಪರೂಪದ ವಿಚಿತ್ರ ಘಟನೆ ಭಾನುವಾರ ನಡೆದಿದೆ.ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠ ಕಳೆದ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿತ್ತು.