ಎಲ್ಲ ಸಂಸ್ಕಾರಗಳಲ್ಲಿ ಗರ್ಭ ಸಂಸ್ಕಾರ ಅತ್ಯಂತ ಮುಖ್ಯಎಲ್ಲ ಸಂಸ್ಕಾರಗಳಲ್ಲಿ ಗರ್ಭ ಸಂಸ್ಕಾರ ಅತ್ಯಂತ ಮುಖ್ಯವಾಗಿದೆ. ತಾಯಿ ಗರ್ಭಿಣಿಯಾಗಿದ್ದಾಗ ನನ್ನ ಮಗು ದೇಶಸೇವೆ ಮಾಡಬೇಕು, ಪರೋಪಕಾರಿ ಆಗಿರಬೇಕು, ಮಾನವೀಯತೆ ಗುಣ ಹೊಂದಿರಬೇಕು. ಸಮಾಜಕ್ಕೆ ಒಳ್ಳೆಯ ಆದರ್ಶ ವ್ಯಕ್ತಿ ಆಗಬೇಕೆಂಬುವುದನ್ನು ಗರ್ಭಿಣಿಯಾಗಿರುವಾಗ ನಿತ್ಯ ಮನದಲ್ಲಿ ಸಂಕಲ್ಪ ಮಾಡಿದರೇ ಆದರ್ಶ ಮಕ್ಕಳು ಜನಿಸುತ್ತಾರೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ನುಡಿದರು.