ದಮ್ಮನಿಂಗಲದಲ್ಲಿ ಜೀರ್ಣೋದ್ಧಾರಗೊಂಡ ದೇಗುಲಗಳ ಉದ್ಘಾಟನೆಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಅಮೃತ ಲಿಂಗೇಶ್ವರ ಸ್ವಾಮಿ ಮತ್ತು ಕಾಲ ಭೈರವೇಶ್ವರರ ಜೀರ್ಣೋದ್ಧಾರಗೊಂಡ ದೇವಾಲಯಗಳ ಲೋಕಾರ್ಪಣೆ, ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಅರ್ಧ ಎಕರೆ ಸ್ಥಳವನ್ನು ನೀಡಿರುವ ಗಂಗಾಧರ್ ಕುಟುಂಬದವರನ್ನು ಪ್ರಶಂಸಿದರು. ದೇವಾಲಯದ ಒಳ ಭಾಗದಲ್ಲಿ ಕಾಂಕ್ರಿಟ್ ಹಾಕಿಸಿ, ೧೦ ಲಕ್ಷ ರು. ಅನುದಾನದಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದರು. ಶಾಸಕರು ದಾನಿಗಳನ್ನು ಸನ್ಮಾನಿಸಿದರು.