ಹುಟ್ಟಿನಂತೆ ಸಾವು ಕೂಡ ಗೌರವಯುತವಾಗಿರಬೇಕುಕ್ಯಾನ್ಸರ್, ಹೃದಯ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಮಾನಸಿಕ ಅಸ್ವಸ್ಥೆಗಳಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ಒಳಗಾಗಿ ಶಾಶ್ವತವಾಗಿ ಬೆಡ್ ರೆಸ್ಟ್‌ಗೆ ಹೋಗಿರುವಂತಹ ರೋಗಿಗಳ ಮನೆಮನೆಗೆ ವೈದ್ಯರು ಮತ್ತು ದಾದಿಯರ ಮೂಲಕ ಭೇಟಿ ನೀಡಿ ಅವರ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆಯನ್ನು ನೀಡುವ ವಿವೇಕಾನಂದ ಯೂಥ್ ಮೂಮೆಂಟ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.