ಪೊದೆಯಲ್ಲಿ ಹೊಳೆನರಸೀಪುರದ ಯುವಕನ ದೇಹ ಪತ್ತೆಹೊಳೆನರಸೀಪುರ ತಾಲೂಕಿನ ಎಸ್.ಅಂಕನಹಳ್ಳಿ ಸಮೀಪದ ಹೆದ್ದಾರಿ ಪಕ್ಕದಲ್ಲಿ ದ್ವಿಚಕ್ರ ವಾಹನ ಹಾಗೂ ಯುವಕನೊಬ್ಬನ ಮೃತದೇಹವನ್ನು ಗಿಡಗಂಟಿಗಳಿಂದ ಮುಚ್ಚಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯೋ ಅಥವಾ ಅಪಘಾತವೋ ಎಂದು ಪೊಲೀಸರ ತನಿಖೆಯಿಂದ ಪತ್ತೆಯಾಗಬೇಕಿದೆ. ಆದರೆ ಮೃತದೇಹ ಮೇಲಿನ ಗಾಯದ ಗುರುತು ಕಂಡ ಪ್ರತ್ಯಕ್ಷದರ್ಶಿಗಳು ಇದು ಭೀಕರ ಕೊಲೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಡಿವೈಎಸ್ಪಿ ಶಾಲು, ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಪಿಎಸ್ಸೈಗಳಾದ ರಮೇಶ್ ಹಾಗೂ ನವ್ಯ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಮತ್ತು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಯಿತು. ಸುದೀಪ್‌ಗೆ ತಂದೆ, ತಾಯಿ, ಹಿರಿಯ ಸಹೋದರ, ಸಹೋದರಿ ಇದ್ದಾರೆ.