ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಮಾತ್ರ ಶೂನ್ಯರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಅವಧಿ ಪೂರೈಸಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಭಾಷಣಕ್ಕೆ ಮಾತ್ರ ಸೀಮಿತರಾಗಿದ್ದು ಬೇರೆ ಯಾವ ಕೆಲಸವೂ ಮಾಡಿಲ್ಲ. ಭ್ರಷ್ಟಾಚಾರ ವಿಚಾರವನ್ನು ತೆಗೆಯಲು ಹೋದರೆ ಅವರು ತಮ್ಮ ಮಾತನ್ನು ಜಾತಿಗಣತಿ, ಆಯೋಗ ಎಂಬ ಬೇರೆ ವಿಷಯಗಳ ಬಗ್ಗೆ ಮಾತನ್ನು ಬದಲಾಯಿಸುವ ಬುದ್ಧಿವಂತಿಕೆ ತೋರಿಸುತ್ತಾರೆ ಎಂದರು.