ಮುಂದಿನ ಮುಂಗಾರಿನಲ್ಲಿ ಹೊಸ ಬಿತ್ತನೆ ಬೀಜಗಳ ಪ್ರಾತ್ಯಕ್ಷಿಕೆ: ಡಾ.ಸಂತೋಷ್ಮೆಕ್ಕೆಜೋಳ ಬೆಳೆಯಲ್ಲಿ ರೋಗ ಹರಡುವ ಕೀಟಗಳ ಹಾವಳಿ, ಮುಳ್ಳುಸಜ್ಜೆ ಕಳೆ, ಅತಿವೃಷ್ಟಿ-ಅನಾವೃಷ್ಟಿ ಸಮಸ್ಯೆಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಸರಾಸರಿ ಉತ್ಪಾದಕತೆ ಹೆಚ್ಚಿಸುವಂತೆ ವೇ ಕ್ಯಾಮ್ಸ್ ಯೋಜನೆ ವತಿಯಿಂದ ಹೊಸದಾಗಿ ಸಂಸ್ಕರಣ ಮಾಡಿದ ಹೈಬ್ರಿಡ್ ಬೀಜಗಳನ್ನು ಪರಿಚಯಿಸುತ್ತಿದೆ ಎಂದು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಡಾ.ಸಂತೋಷ್ ಪಟ್ಟಣ ಶೆಟ್ಟಿ ಹೇಳಿದ್ದಾರೆ.