ಶೃಂಗೇರಿಯಲ್ಲಿ ಅದ್ಧೂರಿ ಶ್ರೀ ಶಾರದಾಂಬ ರಥೋತ್ಸವಪಶ್ಚಿಮ ಘಟ್ಟಗಳ ತಪ್ಪಲು, ಸಹ್ಯಾದ್ರಿ ಪರ್ವತಗಳ ಶ್ರೇಣಿ ತುಂಗೆಯ ತಟದಲ್ಲಿರುವ ಮಹರ್ಷಿ ವಿಭಾಂಡಕ ಮುನಿಗಳ ತಪೋಭೂಮಿ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ 12ನೇ ದಿನವಾದ ಶುಕ್ರವಾರ ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು.