ತುಮಕೂರು ದಸರಾ ಯಶಸ್ವಿ : ಗೃಹ ಸಚಿವರಿಂದ ಶ್ಲಾಘನೆತುಮಕೂರಿನಲ್ಲಿ 11 ದಿನಗಳ ಕಾಲ ಭಕ್ತಿ-ಭಾವ, ಸಾಂಸ್ಕೃತಿಕ ವೈಭವ, ಜನಪದ ಕಲೆಗಳ ಸಂಭ್ರಮದಿಂದ ಕೂಡಿದ ದಸರಾ ಉತ್ಸವವು ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಯಶಸ್ವಿ ಆಯೋಜನೆಗೆ ಶ್ರಮಿಸಿದ ಎಲ್ಲಾ ಇಲಾಖೆಗಳನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಶ್ಲಾಘಿಸಿದರು.