ಆಲಮಟ್ಟಿ ನೀರಿಂದ ಕೆರೆ, ಕಾಲುವೆಗಳಿಗೆ ಜೀವಕಳೆಕನ್ನಡಪ್ರಭ ವಾರ್ತೆ ಇಂಡಿ ಕ್ಷೇತ್ರದ ಜನತೆಯ ಬೇಕುಬೇಡಗಳನ್ನು ಈಡೇರಿಸಲು ಒಬ್ಬ ಜನಪ್ರತಿನಿಧಿ, ಅಧಿಕಾರಿ ದೂರದೃಷ್ಟಿಯೊಂದಿಗೆ ಕೆಲಸ ಮಾಡಿದರೆ ಹೇಗೆಲ್ಲ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಇಂಡಿ ಮತಕ್ಷೇತ್ರ ಸಾಕ್ಷಿಯಾಗಿದೆ. ಭೀಕರ ಬರಗಾಲದಿಂದ, ಹಳ್ಳಕೊಳ್ಳ, ಕೆರೆ ಕಟ್ಟೆಗಳು ಸೇರಿ ಜಲಮೂಲಗಳು ಬತ್ತಿದ್ದರಿಂದ ದಾಹ ತೀರಿಸಿಕೊಳ್ಳಲು ನೀರು ಸಿಗದೆ ಜನರು ಕಂಗಾಲಾಗಿದ್ದರು. ಇಂದು ಮತಕ್ಷೇತ್ರದ ಹಳ್ಳ, ಕೆರೆ, ಕಾಲುವೆಗಳು ಭರ್ತಿಯಾಗಿವೆ.