ಕ್ಯಾನ್ಸರ್ ಬಗ್ಗೆ ಭಯಪಡುವ ಅಗತ್ಯವಿಲ್ಲಕನ್ನಡಪ್ರಭ ವಾರ್ತೆ ವಿಜಯಪುರ ನಗರದಲ್ಲಿ ಬಿಜ್ಜರಗಿ ಬಜಾಜ್ ಟ್ರಯಂಪ್ ಶೋರೂಂ ಸಹಯೋಗದಲ್ಲಿ ಪುರುಷರ ಮಾನಸಿಕ ಆರೋಗ್ಯ ಹಾಗೂ ಪ್ರಾಸ್ಟೇಟ್ (ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯ ಸಹಾಯಕ ಗ್ರಂಥಿ) ಕ್ಯಾನ್ಸರ್ ಜಾಗೃತಿ ಮೂಡಿಸುವ ಸಲುವಾಗಿ ಡಿಸ್ಟಿಂಗವಿಶ್ಡ್ ಜಂಟಲ್ ಮನ್ ರೈಡ್ (DGR) ಹಮ್ಮಿಕೊಳ್ಳಲಾಗಿತ್ತು. ಜಾಗೃತ ಕಾರ್ಯಕ್ರಮದಲ್ಲಿ 16 ವಿವಿಧ ಟ್ರಯಂಪ್ ವಾಹನಗಳಿದ್ದು, ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂದಗಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮುಧೋಳ ಹಾಗೂ ಕಲಬುರಗಿಯಿಂದ 40ಕ್ಕೂ ಅಧಿಕ ರೈಡರ್ಸ್ ಭಾಗವಹಿಸಿದ್ದರು.