ಕಾನೂನು ಅರ್ಥೈಸಿಕೊಂಡು ನಡೆಯುವ ವ್ಯಕ್ತಿಗಳು ದೇಶಕ್ಕೆ ಹಾಗೂ ಸಮಾಜಕ್ಕೆ ಹೊರೆಯಾಗಲಾರಕಾನೂನುಗಳ ರಕ್ಷಣೆ, ಪಾಲನೆ ಸೇರಿದಂತೆ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಇದನ್ನು ಅರ್ಥೈಸಿಕೊಂಡು ನಡೆಯುವ ವ್ಯಕ್ತಿಗಳು ದೇಶಕ್ಕೆ ಅಥವಾ ಸಮಾಜಕ್ಕೆ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.