ಪುತ್ತೂರು: 25ರಂದು ಬಿಲ್ಲವ ಸಂಘದ ಯುವವಾಹಿನಿಯಿಂದ ಜಾನಪದ ಸ್ಪರ್ಧೆಬಿಲ್ಲವ ಸಂಘದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಯುವವಾಹಿನಿ ಪುತ್ತೂರು ಘಟಕ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಸಹಯೋಗದಲ್ಲಿ ‘ಡೆನ್ನಾನ ಡೆನ್ನನ’ ಜಾನಪದ ಶೈಲಿಯ ಕಿರು ನಾಟಕ ಸ್ಪರ್ಧೆ ೨೫ರಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ನಡೆಯಲಿದೆ.