ವಸೂಲಿಗೆ ರೈತ ಸಂಘದ ಟವೆಲ್ ಬಳಕೆಯಾಗದಿರಲಿ: ಚುಕ್ಕಿ ನಂಜುಂಡಸ್ವಾಮಿಹಿಂದೆ ಲಾರಿ ಬಸ್‍ಗಳಲ್ಲಿ ರೈತರು ಹೋರಾಟಕ್ಕೆ ಬರುತ್ತಿದ್ದರು. ಹಸಿರು ಶಾಲು ಶೋಕಿಗೆ ಹಾಕುವುದಲ್ಲ. ಇವತ್ತು ವಸೂಲಿಗೆ ರೈತ ಸಂಘದ ಟವೆಲ್ ಬಳಕೆ ಆಗುತ್ತಿದೆ. ಇವತ್ತಿನ ತಲೆಮಾರಿನ ಒಂದು ವರ್ಗ ಹಸಿರು ಟವೆಲ್‌ಅನ್ನು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.