ಸಹಾಯಕರಿಲ್ಲದೆ ಸೊರಗಿದ ಅಂಗನವಾಡಿ ಕೇಂದ್ರಗಳುಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ 1700ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಶಿಕ್ಷಕಿ ಮತ್ತು ಸಹಾಯಕರ ಹುದ್ದೆಗಳು ಖಾಲಿ ಇದ್ದು ಇದುವರೆಗೂ ನೇಮಕಾತಿ ನಡೆದಿಲ್ಲ. ಭದ್ರಾವತಿ ತಾಲೂಕಿನಲ್ಲಿಯೇ 28 ಕಾರ್ಯರ್ತೆಯರ ಹುದ್ದೆ, 88 ಸಹಾಯಕಿಯರ ಹುದ್ದೆ ಖಾಲಿ ಇವೆ. ಬಹಳ ದಿನಗಳಿಂದ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಸಮೀಪವಿರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರನ್ನು ನಿಯೋಜಿಸಿ ಪ್ರಭಾರ ವ್ಯವಸ್ಥೆ ಮಾಡಲಾಗಿದೆ.