ಅಂಬೇಡ್ಕರ್ ಅಗಾಧ ಪಾಂಡಿತ್ಯವುಳ್ಳ ಶ್ರೇಷ್ಠ ಮಾನವತಾವಾದಿಶಿವಮೊಗ್ಗ: ಭಾರತದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರಗಳಿಸಿದ್ದು, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಸಮಾಜದ ವೈಚಾರಿಕ ಅಮೃತವಾಹಿನಿಯನ್ನು ಎದೆಯಿಂದ ಎದೆಗೆ ಹರಿಸಬೇಕಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜುನ ಹೇಳಿದರು.