ಕುವೆಂಪು ವೈಚಾರಿಕತೆ, ಆದರ್ಶಗಳೇ ನನಗೆ ಮಾರ್ಗದರ್ಶಿಕುವೆಂಪು ಹೆಸರಿನ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ. ಅವರ ವೈಚಾರಿಕತೆ, ಆದರ್ಶಗಳೇ ನನಗೆ ಮಾರ್ಗದರ್ಶಿ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು ಎಂದು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ, ಕುವೆಂಪು ವಿವಿ ನೂತನ ಕುಲತಪಿ ಡಾ.ಶರತ್ ಅನಂತಮೂರ್ತಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.