ಪರಿಷತ್‌ಗೆ ವಿದ್ಯಾವಂತರು, ವಾಗ್ಮಿಗಳ ಅವಶ್ಯವಿದೆ: ಎಚ್.ಹಾಲಪ್ಪಸಾಗರ ತಾಲೂಕಿನಲ್ಲಿ ಪದವೀಧರ ಕ್ಷೇತ್ರಕ್ಕೆ ೧೯೪೬ ಮತದಾರರು, ಶಿಕ್ಷಕ ಕ್ಷೇತ್ರಕ್ಕೆ ೪೬೬ ಮತದಾರರು ನೋಂದಣಿ ಮಾಡಿಸಿದ್ದು ಎಲ್ಲ ಮತದಾರರನ್ನು ಒಂದು ಬಾರಿ ಭೇಟಿಯಾಗಿ ಮತಯಾಚಿಸಲಾಗಿದೆ. ಮತದಾರರಿಗೆ ಕೆಲವು ಪ್ರಮುಖರಿಂದ ದೂರವಾಣಿ ಮೂಲಕ ಸಂಪರ್ಕಿಸಿ ಮತಯಾಚಿಸಲಾಗಿದೆ. ಬುಧವಾರ ಡಾ.ಧನಂಜಯ ಸರ್ಜಿ ಮತ್ತು ಭೋಜೇಗೌಡರು ಸಾಗರ, ಆನಂದಪುರ, ರಿಪ್ಪನ್‌ಪೇಟೆ, ನಗರ, ಹೊಸನಗರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.