ಸೂರ್ಯನ ಚಿನ್ನದ ಕಿರಣವಾಯ್ತು ಕಾದ ಕಬ್ಬಿಣ! ಮಳೆ ಮತ್ತು ಚಳಿಗಾಲದಲ್ಲಿ ಸದಾ ತಂಪಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಬಿಸಿಲಿನ ಆರ್ಭಟ. ಬಯಲು ಸೀಮೆ ಬಿಸಿಲನ್ನು ನಾಚಿಸುವಂತೆ ಮಲೆನಾಡಿನಲ್ಲಿ ಬಿಸಿಲಿನ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮಾರ್ಚ್ ಪ್ರಾರಂಭದಲ್ಲೆ ಬಿಸಿಲಿನ ಝಳ ವಿಪರೀತವಾಗಿದೆ. ಅಧಿಕ ಬಿಸಿಲಿನಿಂದ ರಕ್ಷ ಣೆ ಪಡೆಯಲು ಜನರು ಮರಗಳ ಕೆಳಗೆ, ಗಾಳಿ ಬೀಸುವ ಕೆಲ ವಸ್ತುಗಳಿಗೆ ಮೊರೆಹೋಗಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಗ್ರಾಹಕರಿಲ್ಲ, ಗಾಂಧಿಬಜಾರ್, ಬಿಗ್ ಬಜಾರ್‌ನಂತಹ ಮಾರುಕಟ್ಟೆಗಳ ವ್ಯಾಪಾರವೂ ಡಲ್ ಆಗಿದೆ.