ಚಂದ್ರಗುತ್ತಿ ಜಾತ್ರೆ: ಭಕ್ತರಿಗೆ ಕಾಡಿವೆ ಮೂಲಸೌಕರ್ಯ ಕೊರತೆ ವರ್ಷಕ್ಕೆ ಕೋಟ್ಯಂತರ ರು.ಗಳ ಆದಾಯ ತರುವ ಶ್ರೀ ರೇಣುಕಾಂಬೆ ನೆಲೆವೀಡಿನ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಈಗಾಗಲೇ ಅಂಬೆಯ ಜಾತ್ರೋತ್ಸವದ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ದೊರೆತಿದೆ. ಮಾ.೧೭ ಹೂವಿನ ರಥೋತ್ಸವ, ೧೮ರಂದು ಮಹಾರಥೋತ್ಸವ ಜರುಗಲಿದೆ. ಆದರೆ, ಇಲ್ಲಿನಭಕ್ತರಿಗೆ ಮೂಲಸೌಕರ್ಯಗಳು ಎನ್ನುವುದು ಗಗನಕುಸುಮ ಆಗಿವೆ. ಕುಡಿಯುವ ನೀರಿಗೆ ಹಾಹಾಕಾರ, ಬಯಲೇ ಶೌಚಾಲಯ, ಸ್ತ್ರೀಯರ ಸೀರೆ ಸ್ನಾನಗೃಹ, ದೇಹಬಾಧೆ ತೀರಿಸಿಕೊಳ್ಳಲು ಮರ-ಗಿಡಗಳ ಪೊದೆಗಳೋ, ಜಮೀನುಗಳೇ ಗತಿಯಾಗಿದೆ!