ಈಶ್ವರಪ್ಪ ಸ್ಪರ್ಧಿಸಲಿ, ಓಟು ಹಾಕುತ್ತೇನೆ: ಆಯನೂರುಈಶ್ವರಪ್ಪ ಅವರಿಗೆ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೋಲ್ಲ. ಅವರಿಗೆ ಖಂಡಿತವಾಗಿ ಅಂತಹ ಧೈರ್ಯ ಇಲ್ಲ. ಈಶ್ವರಪ್ಪ ಯಾವ ರಾಜ್ಯ ನಾಯಕನೂ ಅಲ್ಲ, ಕೇವಲ ಶಿವಮೊಗ್ಗ ನಗರದ ನಾಯಕ. ಈಶ್ವರಪ್ಪ ಧೈರ್ಯ ಶಾಲಿಯಾದರೆ, ಜನರಿಗೆ ಬೇಕಾದ ವ್ಯಕ್ತಿ ಆದರೆ, ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಒಂದುವೇಳೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ನನ್ನ ಓಟು ಈಶ್ವರಪ್ಪ ಅವರಿಗೆ ಹಾಕ್ತೇನೆ. ಅವರಿಗೆ ಆ ಧಮ್ ಇಲ್ಲ. ರಾಜಕೀಯ ಗಂಡಸ್ತನ ಇಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಟೀಕಿಸಿದ್ದಾರೆ.