ರಾಮ-ಸೀತೆ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿ: ಶಿಕ್ಷಕಿ ಲಕ್ಷ್ಮೀಸೀತೆ ಶೋಷಿತೆಯಲ್ಲ, ಶಕ್ತಿಯ ಸ್ವರೂಪ. ಶ್ರೀರಾಮ, ಸೀತೆಯ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿಯಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದು, ಪ್ರಾಬಲ್ಯ ಸಾಧಿಸಿದ್ದಾಳೆ. ಆದರೆ, ಮಹಿಳಾ ಪ್ರಧಾನ ನಾಟಕಗಳ ಸಂಖ್ಯೆ ಹೆಚ್ಚಾಗಬೇಕು. ಒಂದು ಪುಸ್ತಕದ ಅಂಶವನ್ನು ಒಂದು ನಾಟಕ ತಿಳಿಸಬಲ್ಲದು ಎಂದು ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮೀ ಭದ್ರಾವತಿಯಲ್ಲಿ ಹೇಳಿದ್ದಾರೆ.