ಶಕ್ತಿಸಾಗರ ಸಂಗಮ ಹೆಸರಿನಲ್ಲಿ ಬಿಜೆಪಿ ಜಾತಿ ಸಮಾವೇಶಶಕ್ತಿಸಾಗರ ಸಂಗಮ ಕಾರ್ಯಕ್ರಮ ಹೆಸರಿನಲ್ಲಿ ಜಾತಿ ಸಮಾವೇಶ ಮಾಡಲು ಬಿಜೆಪಿ ಮುಂದಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿಯವರು ದೀವರು, ಈಡಿಗ, ಬಿಲ್ಲವ, ನಾಮಧಾರಿ ಜೊತೆಗೆ ೨೬ ಪಂಗಡಗಳನ್ನು ಸೇರಿಸಿಕೊಂಡು ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸುತ್ತಿದೆ. ಹಾಗಾದರೆ, ಬಿಜೆಪಿಯವರಿಗೆ ಇತರೆ ಸಮುದಾಯಗಳ ಬೆಂಬಲ ಬೇಡವೇ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಸಾಗರದಲ್ಲಿ ಪ್ರಶ್ನಿಸಿದ್ದಾರೆ.