ಫುಟ್ಬಾಲ್ ಪಂದ್ಯಾವಳಿ: ಮ್ಯಾಜಿಕ್ ಫೀಟ್ ತಂಡ ಪ್ರಥಮರಾಜ್ಯಮಟ್ಟದ 14 ವರ್ಷದೊಳಗಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ತಂಡ ಪ್ರಥಮ ಸ್ಥಾನ ಪಡೆದಿದೆ. ಪಂದ್ಯಾವಳಿಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸುಮಾರು 12 ತಂಡಗಳು ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಮ್ಯಾಜಿಕ್ ಫೀಟ್ ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಚಿತ್ರದುರ್ಗ ತಂಡ ಹಾಗೂ ತೃತೀಯ ಸ್ಥಾನ ಚಿಕ್ಕಮಗಳೂರು ಫುಟ್ಬಾಲ್ ತಂಡವು ಪಡೆದಿದೆ.