ಕಾಲಕ್ಕೆ ತಕ್ಕಂತೆ ಸರ್ಕಾರ ಕಲಾವಿದರಿಗೆ ನೆರವು ನೀಡಲಿ: ಗುಡ್ಡಪ್ಪ ಜೋಗಿಜಾನಪದ ಕಲಾವಿದರಿಗೆ ಮೊದಲು 55 ವರ್ಷಕ್ಕೆ ಮಾಶಾಸನ ನೀಡುತ್ತಿದ್ದರು. ಈಗ 75 ವರ್ಷ ಆಗಬೇಕು ಎಂಬ ನಿಯಮ ಮಾಡಿದ್ದಾರೆ. ಅಷ್ಟು ವರ್ಷ ಬದುಕಿ ಇರುವವರು ಯಾರು. ನಾವು ಸದೃಢವಾಗಿ ಇರುವಾಗಲೆ, ಸರ್ಕಾರ ನಮ್ಮ ನೆರವಿಗೆ ಬರಬೇಕು. ಬದುಕು ಕಟ್ಟಿಕೊಳ್ಳಲು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಹಣಕಾಸಿನ ಸಹಾಯ ಹಸ್ತ ನೀಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಡ್ಡಪ್ಪ ಜೋಗಿ ಮನವಿ ಮಾಡಿದರು.