ಅಕ್ಕನ ನಡೆ ಆತ್ಮಬಲದ ಉನ್ನತ ಅಭಿವ್ಯಕ್ತಿ: ಮರುಳಸಿದ್ದ ಸ್ವಾಮೀಜಿಅತೀ ಸಂಪ್ರದಾಯಬದ್ದವಾದ ಸಮಾಜದ ಕಟ್ಟುಪಾಡುಗಳ ನಡುವೆ ದಿಗಂಬರವನ್ನೇ ದಿವ್ಯಾಂಬರ ಮಾಡಿಕೊಂಡು ನಡೆದವರು ಅಕ್ಕಮಹಾದೇವಿ. ಅಕ್ಕನ ಈ ನಡೆ ಅಂದಿನ ಕೆಲವರಿಗೆ ವಿಲಕ್ಷಣವೆನಿಸಿದರೂ, ಇಂದು ನಿಂತು ನೋಡಿದರೆ, ಯಾವುದೇ ವ್ಯಕ್ತಿಯ ಆತ್ಮಬಲದ ಉನ್ನತ ಅಭಿವ್ಯಕ್ತಿಯಾಗಿ ಕಾಣುತ್ತದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ವಿಶ್ಲೇಷಿಸಿದರು.