ಬೀಡಾಡಿ ದನಗಳ ಸಂರಕ್ಷಣೆಗಾಗಿ ಗೋವರ್ಧನ ಟ್ರಸ್ಟ್ ಬೀಡಾಡಿ ಗೋವಿನ ರಕ್ಷಣೆ ಮತ್ತು ಆರೈಕೆಗಾಗಿ ಸಮಾನ ಮನಸ್ಕರೆಲ್ಲರೂ ಕೂಡಿ ಶಿವಮೊಗ್ಗದಲ್ಲಿ ‘ಗೋವರ್ಧನ’ ಎಂಬ ಟ್ರಸ್ಟ್ ಅನ್ನು ಅಸ್ವಿತ್ವಕ್ಕೆ ತಂದಿದ್ದು, ನಗರದ ಗೋ ಪ್ರೇಮಿಗಳೆಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ಗೋ ಸಂರಕ್ಷಣಾ ಅಭಿಯಾನ ಆರಂಭಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.