ಬೆಲೆ ಏರಿಕೆ ಮಾಡಿ ಸರ್ಕಾರದಿಂದ ಹಗಲು ದರೋಡೆ: ಶಾಸಕ ಆರಗ ಜ್ಞಾನೇಂದ್ರರಾಜ್ಯ ಸರ್ಕಾರದ ಜನವಿರೋದಿ ನೀತಿಯಿಂದಾಗಿ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಜೆಟ್ ಮಂಡನೆಯ ನಂತರದಲ್ಲಿ ಹಾಲು, ಬಸ್ ಪ್ರಯಾಣ, ಸ್ಟಾಂಪ್ ಶುಲ್ಕ ಮತ್ತು ವಿದ್ಯುತ್, ಮದ್ಯ ಮುಂತಾದವುಗಳ ಮೇಲೆ ತೆರಿಗೆ ಹೇರಿಕೆ ಮಾಡುವ ಮೂಲಕ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.