ಗಣತಿ: ಜಾತಿ ಭೋವಿ, ಉಪಜಾತಿ ವಡ್ಡರ ಎಂದು ಬರೆಸಿಆನವಟ್ಟಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಗೊಂಡ ಆಯೋಗವು ಸೋಮವಾರದಿಂದ ಮೇ 25 ರವರೆಗೆ ನಡೆಸುವ ಜನಗಣತಿ ಹಾಗೂ ಒಳಮೀಸಲಾತಿ ಜಾತಿ ಗಣತಿಯಲ್ಲಿ ಭೋವಿ ಜಾತಿಗೆ ಸೇರಿರುವ ಎಲ್ಲಾ ಪಂಗಡದವರು “ಜಾತಿ ಭೋವಿ, ಉಪಜಾತಿ ವಡ್ಡರʼ ಎಂದು ಬರೆಯಿಸುವಂತೆ ಸೊರಬ ತಾಲೂಕು ಭೋವಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಜಯಪ್ಪ ಕರೆ ನೀಡಿದರು.