ಡಿಕೆಶಿಯಿಂದ ರಾಷ್ಟ್ರೀಯ ಭಾವನೆಗೆ ಅಪಮಾನ: ಶಾಸಕ ಆರಗತೀರ್ಥಹಳ್ಳಿ: ಮುಸ್ಲೀಮರಿಗಾಗಿ ಈ ದೇಶದ ಸಂವಿಧಾನವನ್ನೇ ಬದಲಿಸಬಹುದು ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯವಾಗಿದ್ದು, ಈ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟ್ರೀಯ ಭಾವನೆಗೆ ಮಾಡಿದ ಅಪಮಾನವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.