ತಿಪಟೂರು ಪುಟ್‌ಪಾತ್‌ನಲ್ಲಿ ವ್ಯಾಪಾರ ಅಪಘಾತಕ್ಕೆ ಆಹ್ವಾನಇಲ್ಲಿನ ಎಪಿಎಂಸಿ ವತಿಯಿಂದ ಕೋಟ್ಯಂತರ ರು. ವೆಚ್ಚ ಮಾಡಿ ಸುವ್ಯವಸ್ಥಿತ ತರಕಾರಿ-ಹಣ್ಣು ಮಾರುಕಟ್ಟೆ ನಿರ್ಮಿಸಿದ್ದರೂ ಬೀದಿಬದಿ ವ್ಯಾಪಾರಸ್ಥರು ನಗರದ ಬಿ.ಎಚ್. ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಸಾಯಿಬಾಬಾ ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತ, ಅರಳಿಕಟ್ಟೆ, ದೊಡ್ಡಪೇಟೆ, ಕೋಡಿಸರ್ಕಲ್ ರಸ್ತೆಯಲ್ಲಿ ಪಾದಚಾರಿಗಳು ಓಡಾಡುವ ಹಾಗೂ ಪಾರ್ಕಿಂಗ್ ಮಾಡಬೇಕಾದ ಸ್ಥಳಗಳಲ್ಲಿ ತರಕಾರಿ, ಹಣ್ಣು, ಹೂ ಮಾರಾಟ ಮಾಡುತ್ತಿರುವುದರಿಂದ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.