ಬೈರಗೊಂಡ್ಲು ಗ್ರಾಮದಲ್ಲಿ ಬಫರ್ ಡ್ಯಾಂ ನಿರ್ಮಾಣಕ್ಕೆ ರೈತರ ಸಂಘ ಒತ್ತಾಯಕೊರಟಗೆರೆ ತಾಲೂಕಿನಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಬಫರ್ ಡ್ಯಾಂ ನ್ನು ಹಳೆಯ ನಕ್ಷೆಯಂತೆ ಬೈರಗೊಂಡ್ಲು ಬಳಿಯೇ ನಿರ್ಮಿಸಿ, ಅಲ್ಲಿನ ರೈತರಿಗೆ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರವನ್ನು ನೀಡಿ, ಎಲ್ಲರಿಗೂ ಪುನರ್ ವಸತಿ ಕಲ್ಪಿಸಿವುದು ಸರ್ಕಾರದ ಕರ್ತವ್ಯವಾಗಿದ್ದು ಕೂಡಲೆ ಬಫರ್ ಡ್ಯಾಂ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು ಒತ್ತಾಯಿಸಿದ್ದಾರೆ.