ಮಾಲಗಿತ್ತಿ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಮರೀಚಿಕೆ; ಸಮಸ್ಯೆಗಳದ್ದೇ ಕಾರುಬಾರು ಸಮೀಪದ ಹನಮನಾಳ ಹೋಬಳಿಯ ಮಾಲಗಿತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಗಿತ್ತಿಯ ಮಠದ ಹತ್ತಿರ ಇರುವ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ತಾಂಡವಾಡುತ್ತಿದೆ. ಗ್ರಾಪಂ ಸದಸ್ಯ, ಅಧಿಕಾರಿಗಳು ನರೇಗಾ ಯೋಜನೆ ಮೂಲಕ ಈ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಈ ಅವಾಂತರ ಸೃಷ್ಟಿಯಾಗಿದೆ.