ಸಂವಿಧಾನದಿಂದ ಮಾತ್ರ ಸಮಾನತೆ ಕಾಣಲು ಸಾಧ್ಯ: ಕೊಟ್ಟ ಶಂಕರ್ಈ ದೇಶದ ಎಲ್ಲಾ ಮಹಿಳೆಯರಿಗೆ, ಶೋಷಿತರಿಗೆ, ಧ್ವನಿಯಿಲ್ಲದವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಒಂದು ದೊಡ್ಡ ಶಕ್ತಿಯಾಗಿದೆ. ಇಂತಹ ಸಂವಿಧಾನ ಅಪಾಯಕ್ಕೆ ಸಿಗದಂತೆ ಎಚ್ಚರಿಕೆಯಿಂದ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು, ಸಂವಿಧಾನ ವಿರೋಧಿ ಶಕ್ತಿಗಳು ಧರ್ಮಗಳನ್ನು ಜನರ ಮಧ್ಯೆ ಎಳೆದು ತಂದು ಒಡಕು ಸೃಷ್ಟಿಸಲು ಹವಣಿಸುತ್ತಿವೆ.