ತುರ್ತು ಪರಿಸ್ಥಿತಿ-50: ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ತದ ಕಗ್ಗೊಲೆಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅನ್ಯಾಯ. ಆಗ ತುರ್ತು ಪರಿಸ್ಥಿತಿ ವಿರುದ್ಧ ದೇಶದ ತುಂಬಾ ಜನ ಹೋರಾಟ ಮಾಡದಿದ್ದರೆ ಈಗ ರಾಹುಲ್ ಗಾಂಧಿಯವರು ಹೋದ- ಬಂದಕಡೆ ಸಂವಿಧಾನ ಪ್ರತಿಯ ಪುಸ್ತಕ ಹಿಡಿದು ಅಲ್ಲಾಡಿಸುವುದು ಇಂದಿರಾ ಗಾಂಧಿ ತಿದ್ದುಪಡಿ ಮಾಡಿದ ಸಂವಿಧಾನ ಆಗಿರುತ್ತಿತ್ತು ಹೊರತು ಅಂಬೇಡ್ಕರ್ ರಚಿಸಿದ ಸಂವಿಧಾನ ಆಗಿರುತ್ತಿರಲಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.