ದಾಸೋಹದೊಂದಿಗೆ ಶಿವಕುಮಾರ ಸ್ವಾಮೀಜಿಗೆ ಭಕ್ತಿ ಸಮರ್ಪಣೆಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 118 ನೇ ಜನ್ಮದಿನಾಚರಣೆ ಅಂಗವಾಗಿ ತುಮಕೂರು ನಾಗರೀಕ ವೇದಿಕೆ, ವಿಘ್ನೇಶ್ವರ ಗೆಳೆಯರ ಬಳಗ ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಗುರುವಾರ ನಗರದ ವಿವಿಧೆಡೆ ಅನ್ನದಾಸೋಹ ಏರ್ಪಡಿಸಿ ಸ್ವಾಮೀಜಿಗೆ ಭಕ್ತಿ ಸಮರ್ಪಣೆ ಮಾಡಿದರು. ಎಲ್ಲೆಡೆ ಸಾವಿರಾರು ಜನ ದಾಸೋಹ ಸ್ವೀಕಾರ ಮಾಡಿದರು.