ನಿಗಮ, ಮಂಡಳಿಗಳಲ್ಲಿ ಎಸ್ಸಿ ಪ್ರಾತಿನಿಧ್ಯಕ್ಕೆ ಆಗ್ರಹ: ಆರ್. ಧರ್ಮಸೇನಇತ್ತೀಚೆಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಸರಿಯಾದ ಪ್ರಾತಿನಿದ್ಯತೆ ನೀಡಲಾಗಿಲ್ಲ ಎಂದು ಜಿಲ್ಲಾ ಮಟ್ಟದಿಂದ ದೂರುಗಳು ಬಂದಿವೆ. ಆದ್ದರಿಂದ ಇದನ್ನು ಸರಿಪಡಿಸಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಹೇಳಿದ್ದಾರೆ.