ಕಾರ್ಕಳದ ಜಿಎಸ್‌ಬಿ ಶೈಲಿ ಊಟಕ್ಕೆ ಮಾರು ಹೋಗಿದ್ದ ಝಾಕಿರ್!ತಬಲ ಮಾಂತ್ರಿಕ ಝಾಕಿರ್ ಹುಸೇನ್ ಅವರು ಸಂಗೀತ ಕಾರ್ಯಕ್ರಮಕ್ಕೆ ಕಾರ್ಕಳಕ್ಕೆ ಒಮ್ಮೆ ಬಂದಿದ್ದು, ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಾಂಪ್ರದಾಯಿಕ ಶೈಲಿಯ ಅಡುಗೆಗೆ ಮಾರು ಹೋಗಿದ್ದರು. ಮಧ್ಯಾಹ್ನ ಅವರಿಗೆ ನೀಡಿದ್ದ ಮೆನುವನ್ನೇ ರಾತ್ರಿಯೂ ಪುನರಾವರ್ತಿಸಿದ್ದರು. ಅದರಲ್ಲೂ ಇಲ್ಲಿನ ಪತ್ರೊಡೆಯನ್ನು ಪಾರ್ಸೆಲ್ ಕೂಡ ಮಾಡಿಸಿದ್ದರು.