ಹೆಬ್ರಿ: ಕೃತಕ ಆಭರಣ ಮತ್ತು ಕರಕುಶಲ ವಸ್ತುಗಳ ತರಬೇತಿ ಉದ್ಘಾಟನೆಉಡುಪಿಯ ರೊಬೊಸಾಫ್ಟ್ ಟೆಕ್ನಾಲಜೀಸ್, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ರೋಟರಿ ಕ್ಲಬ್ ಮಣಿಪಾಲ, ಹೆಬ್ರಿಯ ರೋಟರಿ ಸಮುದಾಯ ದಳ, ಹೆಬ್ರಿ ಗ್ರಾಮ ಪಂಚಾಯಿತಿ ಮತ್ತು ಧನಲಕ್ಷ್ಮೀ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ೧೦ ದಿನಗಳ ವಿವಿಧ ರೀತಿಯ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹೆಬ್ರಿಯ ಸಮುದಾಯ ಭವನದಲ್ಲಿ ಜರುಗಿತು.