ನಾಡ್ಪಾಲು ಗ್ರಾಮದಲ್ಲೀಗ ಮಡುಗಟ್ಟಿದ ಆತಂಕಸೋಮವಾರ ಸಂಜೆ ನಿಶ್ಯಬ್ದ ಕಾಡಿನಂಚಿನಲ್ಲಿ ಗುಂಡಿನ ಮೊರೆತ, ಮಂಗಳವಾರ ಇಡೀ ದಿನ ಊರಿನ ಇದ್ದ ರಸ್ತೆಗಳಲ್ಲೆಲ್ಲ ಓಡಾಡಿದ ಹತ್ತಿಪ್ಪತ್ತು ಪೊಲೀಸ್ ಜೀಪುಗಳು, ಬಾಡಿಗೆ ವಾಹನಗಳು, ಆಂಬುಲೆನ್ಸ್‌ಗಳ ಕರ್ಕಶ ಸದ್ದು, ಕಣ್ಣೀರು, ಅಳು ಎಲ್ಲ ಮುಗಿದಿದ್ದು, ಇದೀಗ ಇಡೀ ಗ್ರಾಮವೇ ನೀರವ ಮೌನದಲ್ಲಿ ಮುಳುಗಿದೆ.