50 ವರ್ಷಗಳಿಂದ ದೊಂಬರಪಲ್ಕೆ ರಸ್ತೆ ದುರಸ್ತಿ ಮಾಡುತ್ತಿರುವ ವೃದ್ಧ ಜೀವ!ಮಾನಾಜೆ ಮುಖ್ಯ ರಸ್ತೆಯಿಂದ ದೊಂಬರಪಲ್ಕೆ ಹೋಗುವ 1.5 ಕಿ.ಮೀ. ಕಚ್ಛಾ ರಸ್ತೆ, ಡಾಂಬರು ಕಾಣದೆ ಹಾಗೇ ಇದೆ. ಮಳೆಗಾಲದಲ್ಲಂತೂ ಈ ರಸ್ತೆ ಉಪಯೋಗ ಶೂನ್ಯವಾಗಿ ಬಿಡುತ್ತದೆ. ಈ ಪರಿಸ್ಥಿತಿಯನ್ನು ಇದೇ ರಸ್ತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುವ ಅಪ್ಪಿಯಣ್ಣ ನೋಡಿ ಇದರ ದುರಸ್ತಿಗೆ ಇಳಿದರು. ಅದೂ ಕಳೆದ 50 ವರ್ಷದಿಂದ ರಸ್ತೆ ಹಾಗೂ ಅದರ ಚರಂಡಿಯನ್ನು ರಿಪೇರಿ ಮಾಡುತ್ತಿದ್ದಾರೆ, ಆದರೆ ಇಷ್ಟು ಸಮಯದಲ್ಲಿ ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲಿ ಈ ಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ!