ಮೊಬೈಲ್ ಟವರ್‌ಗಳಿಂದ ಉಡುಪಿ ನಗರಸಭೆಗೆ 2 ಕೋಟಿ ರು. ತೆರಿಗೆ ಬಾಕಿಒಂದೆಡೆ ಮೊಬೈಲ್ ನೆಟ್‌ವರ್ಕ್ ಸೇವಾದಾರರ ಮೇಲಾಟದಿಂದಾಗಿ ಜಿಲ್ಲೆಯ ಹೃದಯ ಭಾಗವಾಗಿರುವ ಉಡುಪಿ ನಗರದಲ್ಲಿಯೇ ಸಿಗ್ನಲ್ ತೀರಾ ದುರ್ಬಲವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಇನ್ನೊಂದೆಡೆ ಮೊಬೈಲ್ ಟವರ್ ಕಂಪನಿಗಳು ಕಳೆದ 8 ವರ್ಷಗಳಿಂದ ತೆರಿಗೆ ಶುಲ್ಕವನ್ನು ಪಾವತಿಸದೇ ನಗರಸಭೆಯನ್ನೇ ಯಾಮಾರಿಸುತಿವೆ.