ನೀತಿ ಸಂಹಿತೆ ಉಲ್ಲಂಘನೆ: 94.67 ಲಕ್ಷ ರು. ಮೌಲ್ಯದ ಮದ್ಯ ವಶಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯದ್ದೇ ಸಿಂಹಪಾಲು, ಸುಮಾರು 94,67,004 ರು. ಮೌಲ್ಯದ 15,380 ಲೀ.ನಷ್ಟು ಮದ್ಯವನ್ನು ಅಬಕಾರಿ ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. 1,10950 ರು. ಮೌಲ್ಯದ 3.449 ಕೆ.ಜಿ. ಮಾದಕ ವಸ್ತುಗಳನ್ನು ಹಾಗೂ 3,68,510 ರು. ಮೌಲ್ಯದ ಬಟ್ಟೆಬರೆ, ಸಾಫ್ಟ್ ಡ್ರಿಂಕ್ಸ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.