ಕಾರ್ಕಳ, ಹೆಬ್ರಿಯಲ್ಲಿ ಬಿರುಸಿನ ಮತದಾನಕೂಲಿ ಕೆಲಸಕ್ಕೆ ಹೋಗುವವರು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ನಕ್ಸಲ್ ಪೀಡಿತ ಪ್ರದೇಶಗಳಾದ ಹೆಬ್ರಿ ತಾಲೂಕಿನ ಕಬ್ಬಿನಾಲೆ, ನಾಡ್ಪಾಲು, ಮುದ್ರಾಡಿ, ಅಂಡಾರು, ಕಾರ್ಕಳ ತಾಲೂಕಿನ ಮಾಳ, ಕೆರುವಾಶೆ, ಈದುಗಳಲ್ಲಿ ಮತದಾರರು ಹುರುಪಿನಿಂದ ಮತಚಲಾಯಿಸಿದರು.