ಉಡುಪಿ: ವಿಶ್ವ ಗೀತಾ ಪರ್ಯಾಯಕ್ಕೆ ಕ್ಷಣಗಣನೆ...ಗುರುವಾರ ಮುಂಜಾನೆ 5 ಗಂಟೆ 55 ನಿಮಿಷಕ್ಕೆ ಶ್ರಿ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಡಗೂಡಿ ಸರ್ವಜ್ಞ ಪೀಠಾರೋಹಣ ಮಾಡಿ, ಅಕ್ಷಯಪಾತ್ರೆಯನ್ನು ಸ್ವೀಕರಿಸಲಿದ್ದಾರೆ. ಇದರೊಂದಿಗೆ ಶ್ರೀಪಾದರು ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ, ಕೃಷ್ಣಮಠದ ಆಡಳಿತದ ಜವಾಬ್ದಾರಿ ಮತ್ತು ನಿತ್ಯ ಸಾವಿರಾರು ಮಂದಿಗೆ ಅನ್ನದಾನದ ಕರ್ತವ್ಯವನ್ನು ಹೊಂದಲಿದ್ದಾರೆ.