ಮಿನಿ ಪರ್ಯಾಯದಂತೆ ಕಂಗೊಳಿಸಿದ ಪುತ್ತಿಗೆ ಶ್ರೀ ಪುರಪ್ರವೇಶ ವೈಭವನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು. ಹತ್ತಾರು ಬಗೆಯ ಸ್ತಬ್ಧಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.