ಹಿಜಾಬ್‌ಗೆ ಪ್ರತಿಯಾಗಿ ಕೇಸರಿ: ವಿಹಿಂಪ ಎಚ್ಚರಿಕೆಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಉಡುಪಿಯ ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಬೇಕು ಎಂಬ ದೃಷ್ಟಿಯಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ಬರುವುದು ಶಿಕ್ಷಣಕ್ಕೆ. ಇಲ್ಲಿ ಜಾತಿ ಮತ ಧರ್ಮಗಳು ಮುಖ್ಯವಲ್ಲ, ಶಾಲೆಯೊಳಗೆ ಹಿಜಾಬ್ ಹಾಕಿಕೊಂಡು ಬಂದು ಜಾತಿ ತರಬೇಡಿ ಎಂದು ಪರಿಷತ್ತ್ ಆಗ್ರಹಿಸಿದೆ